ಭಾನುವಾರ, ನವೆಂಬರ್ 15, 2009

ಹಾಡದೇ ಉಳಿದ ಹಾಡು

ಮಬ್ಬುಗತ್ತಲ ಮುದಿ ಸಂಜೆಯಲಿ
ಸೂರ್ಯನು ಸುಸ್ತಾಗಿ ಮಲಗುವ ಹೊತ್ತು
ನಿನ ಕೆಂದುಟಿಯ ಮುಗುಳ್ನಗೆಗೆ
ಕಣ್ಣರಳಿಸಿ ಕಾಯುತ್ತಾ ಕುಳಿತ್ತಿದ್ದೆ
ಯೇರಿ ಹಾದಿಯ ಕಾಲು ಜಾಡಿನಲ್ಲಿ
ಗೂಡು ಸೇರುವ ಗುಬ್ಬಿ ಕೇಳಿತು
ಕಾಯುವುದು ಯಾರಿಗೆಂದು?
ಮುಗುಳ್ನಗೆಯೇ ನನ್ನುತ್ತರ
ಮನದ ಬಿರುಗಾಳಿಗೆ ಮೆದುಳು ತತ್ತರ
ಉತ್ತರಗಳಿಗೆ ಪ್ರಶ್ನೆಗಳ ತಾಕಲಾಟ
ಎಷ್ಟು ಎತ್ತರಕ್ಕೇರಿದೆ ನೀನು?
ಆಸೆ ಆಕಾಂಕ್ಷೆಗಳ ಮೂಟೆ ಹೊತ್ತು
ಬೆನ್ನು ಬಾಗಿದೆ, ಮನಸು ಮಾಗಿದೆ
ನಿನ್ನ ನೆನಪು ಮಾತ್ರ ಮಾಸಿಲ್ಲ
ಹಚ್ಚ ಹಸಿರು, ನಿತ್ಯಹರೀದ್ವರ್ಣದಂತೆ
ದಿನಗಳು, ವಾರಗಳು ಕಾಲಚಕ್ರನ
ಕಾಲ್ತುಳಿತಕ್ಕೆ ಸಿಲುಕಿ ಪುಡಿ ಪುಡಿ,
ಪ್ರತೀಕ್ಷಣ ನಿನ್ನ ಕಾಣಾಲು ತಳಮಳ
ಹತ್ತಿರ ಬಂದಷ್ಟೂ ನೀನು ದೂರ ದೂರ
ಉಳಿದು ಹೋದ ಮಾತುಗಳು
ಹೃದಯ ಬಡಿತದಡಿ ಕರಗಿದ ನೀರವ ಮೌನ
ಬಯಕೆಗಳು ಬಸವಳಿದು
ಎದೆಯ ಗೀತೆಗಳು ಕಮರುವ ಮುನ್ನ
ಉಳಿದು ಹೋದ ಪ್ರೇಮವನ್ನು ನಿವೇದಿಸಿಕೊಳ್ಳುವಾಸೆ
ಹಾಡಲು ಕಾಯುತ್ತಾ ಕುಳಿತಿದ್ದೇನೆ
ಭಾವಬಂಧಗಳ ಸಂಕೋಲೆ ಕಡಿದು
ಶತಮಾನಗಳಾದರೂ ಸರಿ
ಯುಗಗಳು ನಿಗರಿದರೂ ಸರಿ
ಕಂಡವರು ಕಾಣದವರು ಅಣಕಿಸಿದರೂ ಸರಿ
ನೀ ಹೇಳಿದ ಗುರುತಲ್ಲೇ ಕಾಯುತ್ತಿದ್ದೇನೆ
ನಿನಗಾಗಿ ಮಂಡಿಯೂರಿ
ನನ್ನೆದೆಯಲ್ಲಿ ಉಳಿದು ಹೋದ ಹಾಡು ಹೇಳಲು
ನಿಧಾನವಾದರೂ ಪರವಾಗಿಲ್ಲ
ತಪ್ಪದೆ ಬಾ ಅದೇ ಯೇರಿ ಹಾದಿಯ ಮೇಲೆ

ಕಾಮೆಂಟ್‌ಗಳಿಲ್ಲ: