ಭಾನುವಾರ, ನವೆಂಬರ್ 15, 2009

ಪ್ರಚಲಿತ

ಬೆಟ್ಟಗಳು ಬರಿದಾಗಿ
ರಸ್ತೆಗಳು ಬಸಿರಾದವು
ನೆಲಕುರುಳಿದವು
ಅರಳಿ ನೆರಳನೀವ ಮರ
ಕಂದಮ್ಮನ ಹಾಲು!
ಹಾಲಹಲ!!
ನಂಜಾದವು ಸಸ್ಯ ಸಂಕುಲ
ಸೃಷ್ಟಿಸಿದ ಸಂಜಾತನಿಗೇ ಸೆಡ್ಡು
ಹಾಹಕಾರವೆಬ್ಬಿಸಿದೆ ಗುಟುಕು ಜಲ
ಸ್ವಾರ್ಥದ ತಿಮಿರವೇ ಅಮರ!!
ಅಮ್ಮನ ಪಾಲನೆ
ಕಂದನ ನಲ್ನುಡಿ
ಅಪ್ಪನ ಹಿತನುಡಿ
ಆಸ್ವಾಧಿಸುವ ಮುಗ್ದ ಮನಗಳಿಗೆ ಬರ!
ಪ್ರೇಮಿಯಲ್ಲಿ ಪ್ರೀತಿಯಿಲ್ಲ
ಸ್ನೇಹದಲ್ಲಿ ಸ್ವಾರ್ಥ
ಕುರುಡು ಕಾಂಚಾಣದ ಮುಂದೆ
ಉಳಿದಿದ್ದೆಲ್ಲಾ ವ್ಯರ್ಥ
ಕಾಲನ ಕಟ್ಟೆಯಲಿ
ಸೊಟ್ಟಗಾದ ಪ್ರಸ್ತುತದಲ್ಲಿ
ನೆಟ್ಟಗಾಗುವ ವ್ಯವಧಾನವೆಲ್ಲಿ?
ಕಾಲನಿಗೂ ಅವಸರ
ದಾಂಗುಡಿಯ ಧಾವಂತ!!
ಪ್ರಕೃತಿಯ ಪ್ರಹಾರದ ಮುಂದೆ
ಹುಲು ಮಾನವನ ಪಂಥ!

ಕಾಮೆಂಟ್‌ಗಳಿಲ್ಲ: