ಶುಕ್ರವಾರ, ಮೇ 1, 2009

ಫೋಟೋ ಬ್ಲಾಗ್

ಇವೆರಡು ನನ್ನ ಮಗಳ ಫ್ಯಾಷನ್ ರಾಮಪ್ ನಡಿಗೆಯ ಫೋಟೋಗಳು.


ಅಣ್ಣನ ಜೊತೆ ಹಂಪಿಯ ಆಂಜನೇಯ ದೇವಾಲಯದ ಮರದ ಬಳಿ. ಮರದ ಮೇಲಿನ ಕೋತಿಗಳನ್ನು ಬೀಳಿಸಲು ಕೆಳಗೊಂದು ಕೋತಿ ಮರ alladisuttide

ಮತ ಹಾಕಲು ಕಾಸು ಕೇಳುವುದು ನಮ್ಮ ಮೂಲಭೂತ ಹಕ್ಕೆ?
ಹೌದು, ನನಗೆ ಈ ಪ್ರಶ್ನೆ ಪ್ರತಿ ಚುನಾವಣೆ ಹತ್ತಿರ ಬಂದಾಗ ಕಾಡುತ್ತಲೇ ಇರುತ್ತದೆ. ನಗರಪ್ರದೇಶವಾಗಬಹುದು ಹಳ್ಳಿಗಲಾಗಿರಬಹುದು ಚುನಾವಣೆ ಬಂದಾಗ "ದುಡ್ಡು ಕೊಡಿ ವೋಟು ಹಾಕ್ತಿವಿ" ಎನ್ನುವ ಅನೈತಿಕ ಸಂಭಾಷಣೆಗಳನ್ನು ಕೇಳಿದ್ದೇನೆ ಹಾಗೆ ಹೇಳುವವರನ್ನು ನೋಡಿದ್ದೇನೆ. ನಮ್ಮ ಮನೆ ಕೆಲಸ ಮಾಡುವ ಸೇವಕನನ್ನು ನಾವು ಆರಿಸಿ ಅವನು ನಮ್ಮ ಕೆಲಸ ಮಾಡಿದ ನಂತರ ತಿಂಗಳ ಕೊನೆಯಲ್ಲಿ ಅವನಿಗೆ ಸಂಬಳ ಕೊಡುತ್ತೇವೆ. ಹಾಗೆ ಮಾಡುವ ಬದಲು "ನಿನ್ನನ್ನು ಕೆಲಸಕ್ಕೆ ತೆಗೆದು ಕೊಳ್ಳುತ್ತೇವೆ ನನಗೆ ಎಷ್ಟು ಲಂಚ ಕೊಡುತ್ತಿಯೇ?" ಎಂದು ಕೇಳಿ ಅವನಿಂದ ಲಂಚ ತೆಗೆದು ಕೊಂಡರೆ ನಾವು ಅವನಿಂದ ಸರಿಯಾದ ಕರ್ತವ್ಯವನ್ನು ನಿರೀಕ್ಷಿಸಲು ಸಾದ್ಯವೇ? ಆತನಿಗೆ ಕೆಲಸ ಹೇಳಿದ ಕೂಡಲೇ "ಅರೆ ! ಹೋಗಯ್ಯ ಕಂಡಿದ್ದೀನಿ ನೀನೇನ್ ಬಿಟ್ಟಿ ಕೆಲಸಕ್ಕೆ ಸೇರಿಸಿಕೊಂಡಿಲ್ಲ, ಸರಿಯಾಗಿ ಕೊಟ್ಟೆ ತಗೊಂಡಿದ್ದಿಯೇ, ನನ್ನಿಷ್ಟ ಬಂದಾಗ್ ಮಾಡ್ತೀನಿ" ಎನ್ನುವ ಉಡಾಫೆ ಉತ್ತರ ಬರುವುದು ಸಹಜ ಅಲ್ಲವೇ?


ಅದೇ ರೀತಿ ನಾವು ಲಂಚ ತೆಗೆದುಕೊಂಡು ಮತದಾನ ಮಾಡಿದರೆ ಗೆದ್ದುಬಂದವನಿಂದ ನಮ್ಮ ಉದ್ದಾರ ಸಾದ್ಯವೇ ಒಮ್ಮೆ ಯೋಚಿಸಿ.