ಶನಿವಾರ, ಡಿಸೆಂಬರ್ 26, 2009

ಕೆಲ ಕದ್ದ SMS ಜೋಕುಗಳು.................

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.

ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ !!!


’’ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:

'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'

'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು. ?' ಹೆಂಡತಿ ಕೇಳಿದಳು.

'AEROPLANE' ಕಣೇ !!!!!

ಗುಂಡ ಮ್ಯಾರೀಡ್
ಕುಡುಕನೊಬ್ಬ ಬಾರಿಗೆ ಹೋದ. ಪಕ್ಕದ ಟೇಬಲ್‍ನಲ್ಲಿದ್ದವ ವೇಟರ್‌ಗೆ ’ಜಾನಿ ವಾಕರ್ ಸಿಂಗಲ್’ ಎಂದ.

ಮುಂದಿನ ಟೇಬಲ್‍ನಲ್ಲಿ ಕೂತಿದ್ದ ಮತೊಬ್ಬ ’ಪೀಟರ್ ಸ್ಕಾಚ್ ಸಿಂಗಲ್’ ಎಂದ.

ಈ ಕುಡುಕನೂ ಸ್ಟೈಲಾಗಿ ’ಗುಂಡ ಮ್ಯಾರೀಡ್’ ಎಂದ.


ಕಾಫಿ ಬಾರ್ ಮತ್ತು ವೈನ್ ಬಾರ್

ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ ?

ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ !!!
ಟ್ಯಾಕ್ಸಿ ಬಾಡಿಗೆ
ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:

ಕುಡುಕ: ಬಾಡಿಗೆ ಎಷ್ಟಾಯ್ತು ?

ಡ್ರೈವರ್: ಇಪ್ಪತ್ತು ರೂಪಾಯಿ

ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.

ಡ್ರೈವರ್: ಇದು ಹತ್ತು ರೂಪಾಯಿ

ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ???
ಬಕೆಟ್ ತೂತು!!!!!

ಸರ್ದಾರ್: ಡಾಕ್ಟ್ರೆ! ಈ ಬಕೇಟ್ ತೂತಾಗಿದೆ. ಸ್ವಲ್ಪ ನೋಡಿ!

ಡಾಕ್ಟರ್: ಅದೇನೋ ಸರಿ !! ಅದನ್ನ ನಂಗ್ಯಾಕೆ ಹೇಳ್ತಿದೀರಾ? ಗೊತ್ತಾಗ್ಲಿಲ್ಲ..!
ಸರ್ದಾರ್: ನೀವು ತುಂಬಾ ಫೇಮಸ್ ಪ್ಲಾಸ್ಟಿಕ್ ಸರ್ಜನ್ ಅಲ್ವ!! ಅದಕ್ಕೆ!!

'
'
'
ಕೆಮ್ಮು

ಬ್ರ್ಯಾಂಡಿ ಕುಡದ್ರೆ ಕೆಮ್ಮು ಹೋಗುತ್ತಾ ?

ತಿಮ್ಮ : ಯಾಕೆ ಹೋಗಲ್ಲ ?

ನನ್ನ ಹೊಲ, ಮನೆಗಳೇ ಹೋಗಿವೆ ......

ಇನ್ನು ನಿನ್ನ ಕೆಮ್ಮು ಏನ್ ಮಹಾ !!!
'
'
'
'
'
'

ಮೋಹಿನಿ ಕಾಟ
'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ

'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು

ಆದರೆ ಇಂದು 'ತಂಗಾಳಿಯಲ್ಲಿ ನಾನು ತೇಲಿ ಬಂದೆ ' ಎಂದು

ನೀನು 'ಮೋಹಿನಿ'ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು

ಅಷ್ಟಕ್ಕೂ ನಿನಗೆ 'Drink N Drive' ಮಾಡಿ!

'ಸ್ವರ್ಗ' ಸೇರಲು ನಾ ಹೇಳಿದ್ದೆನಾ ! ?
'
'
'
'
'
'

ಫ್ಯಾಮಿಲಿ ಕಳ್ಳ
ಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ?

ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ.
,
,
,
,
,
,
,
,
,
ಖೈದಿ ಸರ್ದಾರ್
ಸರ್ದಾರ್‌ನ ನೇಣು ಹಾಕಬೇಕಾದರೆ,

ಜೈಲರ್ : ನಿನ್ನ ಕೊನೆ ಆಸೆ ಏನು ?

ಸರ್ದಾರ್ : ನನ್ನ ನೇಣು ಹಾಕ್ತಿದ್ದೀರಲ್ಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ಹಾಕಿ ಸಾಕು !!!

ಏರೊಪ್ಲೇನ್ ಹತ್ತಿಸಬೇಕಾ...
ಗುಂಡ ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.

ಪೋಲಿಸ್ : ಏನಯ್ಯಾ ರಾತ್ರಿ 12 ಗಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ? ಏರೊಪ್ಲೇನ್ ಹತ್ತಿಸಬೇಕಾ?

ಗುಂಡ : ಅಯ್ಯೋ ಬೇಡಾ ಸಾರ್...ಯಾವ್ದಾದ್ರು ಒಂದು ಆಟೋ ನಿಲ್ಲಿಸಿ ಹತ್ತಿಸಿಬಿಡಿ ಸಾಕು.. !!!ಸಂಪೂರ್ಣ ರಾಮಾಯಣ
ಪೇದೆ : ರಾಮನವಮಿ ಪ್ರಯುಕ್ತ ನಿನ್ನೆ ಜೈಲಿನ ಖೈದಿಗಳು ’ಸಂಪೂರ್ಣ ರಾಮಾಯಣ’ ನಾಟಕ ಆಡಿದರು ಸಾರ್.

ಜೈಲಿನ ಅಧಿಕಾರಿ : ಅದಕ್ಕೇನೀಗ ?

ಪೇದೆ : ಹನುಮಂತನ ಪಾತ್ರ ವಹಿಸಿದ ಖೈದಿ ಸಂಜೀವಿನಿ ಸಸ್ಯ ತರಲು ಹೋದವನು ಇನ್ನೂ ಬಂದೇ ಇಲ್ಲ ಸಾರ್ !!!ಬಾಂಬ್
ಗೆಳೆಯರಿಬ್ಬರಿಗೆ ಮೂರು ಬಾಂಬ್‍ಗಳು ಸಿಕ್ಕವು. ಪೋಲೀಸ್ ಸ್ಟೇಷನ್‍ಗೆ ತೆಗೆದುಕೊಂಡು ಹೋಗುವಾಗ ಒಬ್ಬಾತ ಹೇಳಿದ

’ದಾರಿಯಲ್ಲಿ ಒಂದು ಬಾಂಬ್ ಢಂ ಅಂದ್ಬಿಟ್ರೆ, ಏನ್ ಮಾಡೋದು ?’

ಇನೊಬ್ಬ ತಣ್ಣಗೆ ಪ್ರತಿಕ್ರಯಿಸಿದ - ’ಮೂರಲ್ಲಿ ಎರಡು ಸಿಕ್ಕಿದ್ದು ಅನ್ನೋಣ’ !!!ಪೇಪರ್ ನೋಡಿದರಾಯ್ತು
ಕಳ್ಳರಿಬ್ಬರು ದರೋಡೆ ಮಾಡಿ ಬಂದು ಒಂದು ಕಡೆ ಕುಳಿತರು.

ಒಬ್ಬ ಕಳ್ಳ : ಎಷ್ಟು ಹಣ ನೋಡೋಣವೇನೋ ?

ಇನ್ನೊಬ್ಬ ಕಳ್ಳ : ನಂಗೆ ನಿದ್ದೆ ಬರುತ್ತಿದೆ ಮನೆಗೆ ಹೋಗೋಣಪ್ಪ. ಹೇಗಿದ್ದರು ನಾಳೆ ಪೇಪರ್‌ನಲ್ಲಿ ಬರುತ್ತಲ್ಲ.....!!!


CORRESPONDENCEನಲ್ಲಿ ಕಾರ್ ಚಾಲನೆ
ಕಾರನ್ನು ವೇಗವಾಗಿ ಓಡಿಸುತ್ತಿದ್ದ ಗುಂಡನನ್ನು ಪೋಲೀಸರು ಹಿಡಿದರು.

ಗುಂಡ : ಸಾರ್ ನಾನು ಕಾರ್ ಚಾಲನೆಯನ್ನು ಕಲಿಯುತ್ತಿದ್ದೇನೆ !!!

ಪೋಲೀಸ್ : ಹಾಗಾದರೆ ನಿನ್ನ INSTRUCTOR ಎಲ್ಲಿ ?

ಗುಂಡ : ನಾನು CORRESPONDENCEನಲ್ಲಿ ಕಲಿಯುತ್ತಿದ್ದೇನೆ ಸಾರ್.......!!!


ಪಾರ್ಕಿಂಗ್ ಫೈನ್
ಗುಂಡ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿ ಶಾಪಿಂಗ್‍ಗೆ ಹೋದ.

ಮರಳಿ ಬರುವಷ್ಟರಲ್ಲಿ ಗುಂಡನ ಕಾರಿನ ಮೇಲೆ ’ PARKING FINE’ ಎಂದು ಬರದ ನೋಟಿಸ್ ಅಂಟಿಸಲಾಗಿತ್ತು.

ಅದರ ಕೆಳಗೆ ಗುಂಡ ಬರೆದ : THANKS FOR THE COMPLIMENTS !!!

ಚಾರ್ಲ್ಸ್ ಡಾರ್ವಿನ್ ನ Struggle for Existance ಮತ್ತು ಭಯೋತ್ಪಾದಕರೆಂಬ ಬಸ್ಮಾಸುರರು......

ಭಯೋತ್ಪಾದನೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಎಲ್ಲಿಬೇಕಾದರೂ ಬೆಚ್ಚಿಬೀಳಿಸುವ ಏಕ ಮಾತ್ರ ಪದ....
'ಭಯೋತ್ಪಾದನೆ' ಒಂದು ಪೆಡಂಭೂತ, ಮನುಕುಲ ವಿನಾಶಕವಷ್ಟೇಅಲ್ಲ, ' ಕುಲಕ್ಕೆ ಮೃತ್ಯು ಕೊಡಲಿಯ ಕಾವು' ಎಂಬಂತೆ ತಾನು ತನ್ನವರೆಂಬ ಬೇಧ ಭಾವ ಇರುವುದಿಲ್ಲ, ಹಿರಿಯರು-ಕಿರಿಯರು ಎಂಬ ವಯಸ್ಸಿನ ತಾರತಮ್ಯವಿರುವುದಿಲ್ಲ, ಬಡವ ಬಲ್ಲಿದ ನೆಂಬ ಕಾರುಣ್ಯದ ಕಣ್ಣು ಸಹ ಇಲ್ಲ ಈ ಭಯೋತ್ಪಾದನೆಗೆ. ಎದುರಿಗೆ ಬಂದವರನ್ನು ನಾಶಮಾಡುವುದಷ್ಟೇ ಗೊತ್ತು.

ಬಹುಶಃ 'ಭಯೋತ್ಪಾದನೆ' ಜೀವಿಯ ಉಗಮದೊಂದಿಗೇ ಹುಟ್ಟಿರಬೇಕು. ತನ್ನದೇ ಪರಿಸರದ ಮತ್ತೊಂದು ಜೀವಿ ಅಥವಾ ತನ್ನದೇ ಜಾತಿಯ ಮತ್ತೊಬ್ಬ ಸದಸ್ಯರ ನಡುವೆ ಆಹಾರಕ್ಕಾಗಿ ಅಂತಃಕಲಹವೇರ್ಪಟ್ಟು ಯಾವುದು ಶಕ್ತಿಯುತವಾಗಿ ನಿಂತು ಬಡಿದಾಡಿ ಗೆಲ್ಲುತಿತ್ತೋ ಅದು ಸಹಜವಾಗಿ ಬೇರೆ ಸದಸ್ಯರಿಗೆ ಭಯವನ್ನುಂಟುಮಾಡುತಿತ್ತು ಮತ್ತು ಬದುಕುಳಿಯುತ್ತಿತ್ತು. ಇದು ಪ್ರಕೃತಿಯ ನಿಯಮ. ಇದನ್ನೇ ಚಾರ್ಲ್ಸ್ ಡಾರ್ವಿನ್ ಅಸ್ಥಿತ್ವಕ್ಕಾಗಿ ಹೋರಾಟ ಅಥವಾ Struggle for Existance ಎಂದು ಕರೆದದ್ದು. ಈ ನಿಯಮದಲ್ಲಿ ಸಾಕಷ್ಟು ನೀತಿ ನಿಜಾಯಿತಿಗಳಿವೆ, ಉದಾ; ಕೋಳಿಗಳಲ್ಲಿ ಅತ್ಯಂತ ಬಲಿಷ್ಠವಾದ 'ಹುಂಜ' ನಿಗೆ ತನ್ನ ತಂಡದ ಇತರ ಸದಸ್ಯರು ಗೌರವ ಕೊಡಬೇಕು ಅಷ್ಟೇ ಅಲ್ಲ ಅದರ ಎದುರು ಬಂದರೆ ತಲೆಯ ಮೇಲೆ ಕುಕ್ಕಿಸಿಕೊಳ್ಳಲೇಬೇಕು, ಅಕಸ್ಮಾತ್ ತಂಡದ ಯಾವುದಾದರು ಸದಸ್ಯನಿಗೆ ಅದು ಇಷ್ಟವಾಗಲಿಲ್ಲವೆಂದರೆ ಆ 'ಹುಂಜ' ನೊಡನೆ ಕಾದಾಡಿ ಗೆಲ್ಲಬೇಕು ಸೋತ ಹುಂಜ ಗೆದ್ದವರ ಅಡಿಯಾಳಾಗಿರಬೇಕು. ಈ ರೀತಿಯ ನಿಯಮಗಳು ಎಲ್ಲಾ ಸಣ್ಣಜೀವಿಗಳಿಂದಿಡಿದು ದೊಡ್ಡ ಜೀವಿಗಳವರೆವಿಗೂ ಒಂದಲ್ಲ ಒಂದು ವಿಷಯದಲ್ಲಿ ಇದ್ದೇ ಇದೆ. ಇದು ಪ್ರಕೃತಿ ಅವುಗಳ ಶಿಸ್ತುಬದ್ದ ಬದುಕಿಗೆ ರೂಪಿಸಿದ ನಿಯಮ, ಇದನ್ನು ಅವುಗಳು ಯಾವುವೂ ಮುರಿಯುವುದಿಲ್ಲ ಅಷ್ಟೇಅಲ್ಲ ಅದನ್ನು ಪರಸ್ಪರ ಗೌರವಿಸುತ್ತವೆ.

ಹಾಗಾದರೆ ಪ್ರಕೃತಿಯಲ್ಲೇ ಶ್ರೇಷ್ಠ ಜೀವಿಯಾದ ಮಾನವನಲ್ಲಿ ಯಾವ ನಿಯಮಗಳನ್ನು ಪ್ರಕೃತಿ ನಿರ್ಮಿಸಿಲ್ಲವೇ?
ಮಾನವನು ಪ್ರಕೃತಿಗಿಂತ ಬಲಿಷ್ಠನೇ?

ಎನ್ನುವ ಉತ್ತರ ಸಿಗದ ಸಹಸ್ರಾರು ಪ್ರಶ್ನೆಗಳು ಮನದ ಮೂಲೆಯಲ್ಲಿ ಕೊರೆಯುವುದು ಸಹಜವೇ....
ಮಾನವನ ಹುಟ್ಟಿನಲ್ಲಿ ಮೊದಮೊದಲು ಕೇವಲ ಆಹಾರಕ್ಕಾಗಿ ಇತರ ಜೀವಿಗಳೊಡನೆ ಸೆಣಸುತ್ತಾ ತನ್ನ ಅಸ್ಥಿತ್ವಕ್ಕಾಗಿ ಹೋರಾಡುತ್ತಿದ್ದವ, ನಂತರ ಬುದ್ದಿಬೆಳೆದಂತೆಲ್ಲಾ ತನ್ನ ಸುತ್ತಮುತ್ತಲ ಪರಿಸರಕ್ಕಾಗಿ ಇತರ ಪ್ರಾಣಿಗಳೊಡನೆ ಸೆಣಸಲಾರಂಬಿಸಿ ಅವುಗಳಿಗೆ ಭಯೋತ್ಪಾದಕನಾದ. ನಂತರ ತಾನಿಷ್ಟಪಟ್ಟ ಹೆಣ್ಣನ್ನು ದಕ್ಕಿಸಿಕೊಳ್ಳಲು ತನ್ನದೇ ವರ್ಗಕ್ಕೇ ಭಯೋತ್ಪಾದಕನಾಗುವ ಮೊದಲ ಹೆಜ್ಜೆ ಇಟ್ಟ.
ಇಲ್ಲಿಯವರೆವಿಗೂ ಚಾರ್ಲ್ಸ್ ಡಾರ್ವಿನ್ ನ ಥಿಯರಿ ಅನ್ವಯಿಸುತ್ತದೆ, ಬಹುಶಃ ಪ್ರಕೃತಿಯ ನಿಯಮಗಳನ್ನೂ ಪಾಲಿಸಿದ್ದಾನೆ.
ಆದರೆ ನಂತರ ಶುರುವಾಯ್ತು ನೋಡಿ 'ತಾನು ಕಂಡಿದ್ದೆಲ್ಲಾ ತನಗೇ ಮೀಸಲು' ತಾನು ಜಗದೊಡೆಯ, ತಾನು ಎಲ್ಲರಿಗಿಂತಾ ಬುದ್ದಿಜೀವಿ' ಎನ್ನುವುದು ಯಾವಾಗ ಆತನ ತಲೆಗೇರಿತೋ ಅಂದಿನಿಂದಲೇ ಸಂಪೂರ್ಣ "ಸ್ವಾರ್ಥ"ದ ದಾಸನಾಗಿ, ಎಲ್ಲವನ್ನೂ ಕಬಳಿಸಿ, ಕಡೆಗೆ ದೇವರ ಹೆಸರಿನಲ್ಲಿ ಭಯೋತ್ಪಾದಕನಾಗಿ ಇಂದು ನಿಂತಿದ್ದಾನೆ.
ಅದರಲ್ಲೂ ಕೆಲ ದೇಶಗಳಲ್ಲಿ ಭಯೋತ್ಪಾದಕನಾಗಿ ಸಾಯುವುದು ದೇವರ ಆಜ್ನೆ, ದೇವರ ಸಿಂಹಾಸನದಲ್ಲಿ ಅರ್ಧ ಸಿಕ್ಕುತ್ತದೆ ಇತ್ಯಾದಿ.......ಇತ್ಯಾದಿ.......ಇತ್ಯಾದಿ....... ಕಟ್ಟುಕಥೆಗಳನ್ನು ಹೇಳಿ, ಕೆಳ ವರ್ಗದ ಬಡವರಿಗೆ ಇಲ್ಲಸಲ್ಲದ ಆಸೆ ಆಮಿಷ ತೋರಿಸಿ ಮುಗ್ದ ಜೀವಗಳನ್ನು ಬಲಿತೆಗೆದು ಕೊಂಡು ಖುಷಿಪಡುತ್ತಾರೆ. ಈ ವಿಚಾರದಲ್ಲಿ ನಮ್ಮ ಪಕ್ಕದ 'ಪಾಕಿಸ್ತಾನ" ಎತ್ತಿದ ಕೈ.
ಇಂದು National Geographic Channel ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪ್ರಕಾರ ಕೇವಲ 3000 ರೂಗಳಿಗೆ ಒಬ್ಬ 'ಆತ್ಮಾಹುತಿ ಬಾಂಬರ್' ದೊರುಕುತ್ತಾನಂತೆ, ಅಷ್ಟೆ ಅಲ್ಲ ಕಳೆದ ವರ್ಷದ ಮುಂಬೈ ದಾಳಿ, ಅಮೇರಿಕಾದ ಡಬ್ಲ್ಯು. ಟಿ. ಓ ಕಟ್ಟಡಗಳ ದಾಳಿ, ಇವತ್ತಿನ ಆಫ್ಘನ್ ಮತ್ತು ಇರಾಕಿನ ಆತ್ಮಾಹುತಿ ದಾಳಿಗಳ ಬಾಂಬರ್ ಗಳೆಲ್ಲಾ ಪಾಕಿಸ್ತಾನದವರೇ. ಅಂದ ಮಾತ್ರಕ್ಕೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಪಾಕಿಸ್ತಾನದವರೆ ಅನ್ನುವುದು ವಿಪರ್ಯಾಸ.
ಅಂದು ತನ್ನ ಶತೃವಾದ ರಷ್ಯಾವನ್ನು ಎದುರಿಸಲು "ಒಸಾಮ ಬಿನ್ ಲಾಡೆನ್'' ನನ್ನು ಬೆಳೆಸಿದ್ದು ಇದೇ ಅಮೇರಿಕ!!!!!!. ಕಡೆಗೆ ಅಮೇರಿಕಾದ ಸೊಕ್ಕಿಗೆ ಸೆಡ್ಡು ಹೊಡೆದದ್ದು ಇದೇ ಒಸಾಮ ಬಿನ್ ಲಾಡೆನ್!!!!!!!!! ಅಷ್ಟೆ ಅಲ್ಲ ಭಾರತದ ವಿರುದ್ದ ಹೋರಾಡಲು ಪಾಕಿಸ್ತಾನ ಬೆಳೆಸಿದ್ದು ಇದೇ ಭಯೋತ್ಪಾದಕರನ್ನು, ಕಡೆಗೇನಾಯ್ತು? ಇಂದಿನ ಪಾಕಿಸ್ತಾನದಲ್ಲಿ ದಿನಕ್ಕೆರಡು ಆತ್ಮಾಹುತಿ ದಾಳಿ ಅದೇ ಪಾಕಿಸ್ತಾನಿ ಭಯೋತ್ಪಾದಕರಿಂದ!!!!!!
ಅದಕ್ಕೇ ಹೇಳೋದು ಭಯೋತ್ಪಾದಕರು ಬಸ್ಮಾಸುರರು!!!!!!!!