ಶುಕ್ರವಾರ, ಜೂನ್ 27, 2014

ಎದೆಯೊಳಗೆ ನಿನ್ನದೇ ಸದ್ದುಗಳು......

ಎದೆಯೊಳಗೆ ನಿನ್ನದೇ ಸದ್ದುಗಳು
ಹೆಜ್ಜೆಗಳ  ಗುರುತಿದೆ
ಗೆಜ್ಜೆಯ ನಾದವಿದೆ

ಕಣ್ಣೊಳಗೆ ನಿನದೇ ಕನಸುಗಳು
ಕಾಮನಬಿಲ್ಲಿಗೇ ಗಾಳ ಹಾಕಿ
ಬಣ್ಣಗಳ ಹೀರುತ್ತಾ ಬರೆದ
ಚೆಂದದ ಸುಂದರ ಚಿತ್ತಾರ
ಮನದ ಗೋಡೆಯ ಮೇಲೆ
ಅಳಿಸಲಾಗದ ಅಚ್ಚ ಹಸಿರು

ಕರ್ಣದೊಳಗೆ
ನಿನ್ನ ಕರುಣೆಯ ಇನಿದನಿ
ಭಾವರಾಗಕೆ ಮಿಡಿದ ಶೃತಿಯಾಗಿ
ಹೊಮ್ಮಿದ ನಾದತರಂಗ
ನೀ ಪಿಸುಗುಟ್ಟಿದ ಪ್ರೀತಿ
ಮಾತುಗಳ  ಪ್ರತಿಧ್ವನಿ

ನಿನ ಸುಕೋಮಲ
ಕರಗಳಿಗರಷ್ಟು  ಶಕ್ತಿ
ಎನ್ನ ಮನದ ಕರಿಮುಗಿಲೆತ್ತರದ
ಕಡು ಕಷ್ಟಗಳ  ಕತ್ತು ಹಿಚುಕಿ
ಹುಡಿಮಾಡಿ ನೆಮ್ಮದಿಯ
ನೆರಳನೆರೆದ ಬೆರಳುಗಳ
ಸುಸ್ಪರ್ಶ ನನಗೆಂದಿಗೂ
ಧೈರ್ಯದ ದಾರಿದೀಪ

3 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಇಂತಹ ಸಂಪೂರ್ಣ ಒಲವಿನ ಅರ್ಪಣೆ ಇದ್ದರೆ ಮಾತ್ರ ಸಿದ್ಧಿ ಆ ಸಾಕ್ಷಾತ್ಕಾರ.
ತಮ್ಮ ಭಾಷಾ ಬಳಕೆಯಲ್ಲೂ ಲಾಲಿತ್ಯತೆ ಇದೆ.
ಹೊಸ ಬ್ಲಾಗ್ ಓದಿಸಿದ ತಮಗೆ ಶರಣು.

ತಮ್ಮನ್ನು ಫೇಸ್ ಬುಕ್ಕಿನ 3K ಗುಂಪಿಗೆ ಸೇರಿಸಿದ್ದೇನೆ. ಅಲ್ಲಿ ತಮ್ಮ ಬ್ಲಾಗನ್ನೂ share ಮಾಡಿದ್ದೇನೆ.
https://www.facebook.com/groups/kannada3K/permalink/435285689889320/

ಉಮಾಶಂಕರ್ ಹೇಳಿದರು...

ಸರ್ ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗಳಿಗೆ ನಾ ಚಿರಋಣಿ...
ಮತ್ತು ನನ್ನ ಬ್ಲಾಗನ್ನು 3k ಗುಂಪಿಗೆ ಸೇರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು...:)

ಉಮಾಶಂಕರ್ ಹೇಳಿದರು...

ಸರ್ ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗಳಿಗೆ ನಾ ಚಿರಋಣಿ...
ಮತ್ತು ನನ್ನ ಬ್ಲಾಗನ್ನು 3k ಗುಂಪಿಗೆ ಸೇರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು...:)