ಶುಕ್ರವಾರ, ಫೆಬ್ರವರಿ 18, 2011

ಪ್ರೇಮದ ಕಾಣಿಕೆ

ಬಟ್ಟ ಬಯಲಿನ ಬರಡು ಬದುಕಲಿ
ದಿಟ್ಟ ನಡೆಯಿಟ್ಟು ಎನ್ನೆದೆಯ
ಮೆಟ್ಟಿಲೇರಿದ ಎನ್ನ ಪಟ್ಟದರಸಿ
ಬಳಲಿ ಬೆಂಡಾದಾಗ ನಿನ್ನುಸಿರ
ಗಾಳಿಯ ಬೀಸಿ ತಂಪನೆರೆವ
ಮುಂಗಾರು ಮಾರುತ

ಎನ್ನ ಅಕಾಲಿಕ ಅಸಹನೆಯ
ತೊಳೆದೋಡಿಸುವ ಸಹನಾ ನದಿ
ತಳಮಳಗಳ ತಣಿಸುವ ತಪೋನಿಧಿ
ಕಷ್ಟ ಕಾರ್ಪಣ್ಯಗಳ ಆಪೋಶನ ಮಾಡುವ
ಶಾಂತ ಕರುಣಾ ಸಾಗರ

ಪಟಪಟನೆ ಬಡಿದಾಡುವ ಹೃದಯ ಮಿಡಿತದಿ
ಮಿಳಿತಗೊಂಡ ನಿನ್ನುಸಿರ ಹೆಸರ
ಕಡೆಗಣಿಸಿದಲ್ಲೇ ಎನ್ನ ಕಡೆಗಾಲ
ಮರೆತಾಗ ಅಡಗಲಿ ನನ್ನುಸಿರು

ಇಗೋ ನನ್ನ ಪ್ರೇಮದ ಕಾಣಿಕೆ
ಧಿಕ್ಕರಿಸದೆ, ಕೆಕ್ಕೆರಿಸಿದೆ
ಒಪ್ಪಿಸಿಕೋ ನನ್ನುಸಿರೊಡತಿ

3 ಕಾಮೆಂಟ್‌ಗಳು:

Bhairav Kodi ಹೇಳಿದರು...

ಒಪ್ಪಿಸಿಕೊಂಡಿದ್ದೇನೆ ನಿಮ್ಮ ಸುಂದರವಾದ ಪ್ರೇಮ ಕಾವ್ಯ ತುಂಬಾ ಸೊಗಸಾಗಿದೆ....ಬರೀರಿ ಮತ್ತಷ್ಟು

ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಹೇಳಿದರು...

ತುಂಬಾ ಧನ್ಯವಾದಗಳು ಸರ್!
ಖಂಡಿತಾ ಬರೆಯುತ್ತೇನೆ

ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಹೇಳಿದರು...

ತುಂಬಾ ಧನ್ಯವಾದಗಳು ಸರ್!
ಖಂಡಿತಾ ಬರೆಯುತ್ತೇನೆ