ಶನಿವಾರ, ಡಿಸೆಂಬರ್ 6, 2014

ಪ್ರಶ್ನಾ ಸರೋವರ

ಉತ್ತರಗಳ ಸರೋವರಕ್ಕೆ ಪ್ರಶ್ನೆಯೊಂದ ಹಿಡಿದು ಧುಮುಕಿದರೆ 
ಮನದ ಮಾತುಗಳೆಲ್ಲ ಖಾಲಿ ಖಾಲಿ...........
ಸರೋವರವ ಬರಿದು ಮಾಡಿತ್ತು ಹೊಸ ಪ್ರಶ್ನೆಗಳ ಪರ್ವ..
ಮನಕೇನೋ ಇನ್ನೇನೋ ಹೇಳುವ ಕಾತುರ
ಕೇಳುವ ಕಿವಿಗಳಲ್ಲಿ ಸಾಂತ್ವಾನ ಸಂತೈಕೆಗಳ ಸೊಲ್ಲಿಲ್ಲ .....
ಕಂಡ ಕನಸುಗಳೆಷ್ಟೋ ..?? ನನಸಾಗಲು ಒಂದೂ ಇಲ್ಲ.....
ಎಲ್ಲವೂ ಕಮರಿವೆ... ಮರಟಿ, ಮುದುಡಿ, ಮುದಿಯಾಗಿವೆ...
ಪ್ರೀತಿಯ ನೀರೆರೆದರೂ ಚಿಗುರುವುದಿಲ್ಲ....
ಹಾಗೆಂದು ತಿಪ್ಪೆಗೆಸೆಯಲೂ ಸಾಧ್ಯವೇ ಇಲ್ಲ...
ಹೆಕ್ಕಿ ತಗೆದರೆ ಬರೀ ನೋವು....
ಹಾಗೆ ಮರೆತರೆ ಸಾವು..!!! ನನಗೂ ಅವಕ್ಕೂ........

ಹೃದಯದ ತೊಲೆಗೆ ಕೊಂಡಿಗಳಾಗಿ ನೇತಾಡುತ್ತಾ...
ಪ್ರತಿ ಕ್ಷಣದ ನೆನಪಿನ ಗಾಳಿಗೆ ಜೀಕುತ್ತಾ.. ಜೋಕುತ್ತಾ..
ನೆಮ್ಮದಿಯ ನೆತ್ತರ ಬಸಿದು .... ಅಟ್ಟಹಾಸ.....!!!!!!
ಎದುರಿಸುವ ಧೈರ್ಯ... ಅಂದೂ ಇಲ್ಲ.... ಇಂದೂ ಇಲ್ಲ..


2 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಇದಲ್ಲವೇ ಅಸಲೀ ಮನೋ ಹಿಂಸೆ.
ಪ್ರಶ್ನೆಗಳಿಗೆ ಉತ್ತರಿಸದು ಕಳ್ಳ ಮನಸು ಮತ್ತು ಕಳ್ಳಿಯ ಮನಸೂ!

Shankar Unknownu ಹೇಳಿದರು...

ಅವರವರ ಇಚ್ಚೆಯಂತೆ ಅವರವರ ಮನದೊಳಗೆ