ಭಯೋತ್ಪಾದನೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಎಲ್ಲಿಬೇಕಾದರೂ ಬೆಚ್ಚಿಬೀಳಿಸುವ ಏಕ ಮಾತ್ರ ಪದ....
'ಭಯೋತ್ಪಾದನೆ' ಒಂದು ಪೆಡಂಭೂತ, ಮನುಕುಲ ವಿನಾಶಕವಷ್ಟೇಅಲ್ಲ, ' ಕುಲಕ್ಕೆ ಮೃತ್ಯು ಕೊಡಲಿಯ ಕಾವು' ಎಂಬಂತೆ ತಾನು ತನ್ನವರೆಂಬ ಬೇಧ ಭಾವ ಇರುವುದಿಲ್ಲ, ಹಿರಿಯರು-ಕಿರಿಯರು ಎಂಬ ವಯಸ್ಸಿನ ತಾರತಮ್ಯವಿರುವುದಿಲ್ಲ, ಬಡವ ಬಲ್ಲಿದ ನೆಂಬ ಕಾರುಣ್ಯದ ಕಣ್ಣು ಸಹ ಇಲ್ಲ ಈ ಭಯೋತ್ಪಾದನೆಗೆ. ಎದುರಿಗೆ ಬಂದವರನ್ನು ನಾಶಮಾಡುವುದಷ್ಟೇ ಗೊತ್ತು.
ಬಹುಶಃ 'ಭಯೋತ್ಪಾದನೆ' ಜೀವಿಯ ಉಗಮದೊಂದಿಗೇ ಹುಟ್ಟಿರಬೇಕು. ತನ್ನದೇ ಪರಿಸರದ ಮತ್ತೊಂದು ಜೀವಿ ಅಥವಾ ತನ್ನದೇ ಜಾತಿಯ ಮತ್ತೊಬ್ಬ ಸದಸ್ಯರ ನಡುವೆ ಆಹಾರಕ್ಕಾಗಿ ಅಂತಃಕಲಹವೇರ್ಪಟ್ಟು ಯಾವುದು ಶಕ್ತಿಯುತವಾಗಿ ನಿಂತು ಬಡಿದಾಡಿ ಗೆಲ್ಲುತಿತ್ತೋ ಅದು ಸಹಜವಾಗಿ ಬೇರೆ ಸದಸ್ಯರಿಗೆ ಭಯವನ್ನುಂಟುಮಾಡುತಿತ್ತು ಮತ್ತು ಬದುಕುಳಿಯುತ್ತಿತ್ತು. ಇದು ಪ್ರಕೃತಿಯ ನಿಯಮ. ಇದನ್ನೇ ಚಾರ್ಲ್ಸ್ ಡಾರ್ವಿನ್ ಅಸ್ಥಿತ್ವಕ್ಕಾಗಿ ಹೋರಾಟ ಅಥವಾ Struggle for Existance ಎಂದು ಕರೆದದ್ದು. ಈ ನಿಯಮದಲ್ಲಿ ಸಾಕಷ್ಟು ನೀತಿ ನಿಜಾಯಿತಿಗಳಿವೆ, ಉದಾ; ಕೋಳಿಗಳಲ್ಲಿ ಅತ್ಯಂತ ಬಲಿಷ್ಠವಾದ 'ಹುಂಜ' ನಿಗೆ ತನ್ನ ತಂಡದ ಇತರ ಸದಸ್ಯರು ಗೌರವ ಕೊಡಬೇಕು ಅಷ್ಟೇ ಅಲ್ಲ ಅದರ ಎದುರು ಬಂದರೆ ತಲೆಯ ಮೇಲೆ ಕುಕ್ಕಿಸಿಕೊಳ್ಳಲೇಬೇಕು, ಅಕಸ್ಮಾತ್ ತಂಡದ ಯಾವುದಾದರು ಸದಸ್ಯನಿಗೆ ಅದು ಇಷ್ಟವಾಗಲಿಲ್ಲವೆಂದರೆ ಆ 'ಹುಂಜ' ನೊಡನೆ ಕಾದಾಡಿ ಗೆಲ್ಲಬೇಕು ಸೋತ ಹುಂಜ ಗೆದ್ದವರ ಅಡಿಯಾಳಾಗಿರಬೇಕು. ಈ ರೀತಿಯ ನಿಯಮಗಳು ಎಲ್ಲಾ ಸಣ್ಣಜೀವಿಗಳಿಂದಿಡಿದು ದೊಡ್ಡ ಜೀವಿಗಳವರೆವಿಗೂ ಒಂದಲ್ಲ ಒಂದು ವಿಷಯದಲ್ಲಿ ಇದ್ದೇ ಇದೆ. ಇದು ಪ್ರಕೃತಿ ಅವುಗಳ ಶಿಸ್ತುಬದ್ದ ಬದುಕಿಗೆ ರೂಪಿಸಿದ ನಿಯಮ, ಇದನ್ನು ಅವುಗಳು ಯಾವುವೂ ಮುರಿಯುವುದಿಲ್ಲ ಅಷ್ಟೇಅಲ್ಲ ಅದನ್ನು ಪರಸ್ಪರ ಗೌರವಿಸುತ್ತವೆ.
ಹಾಗಾದರೆ ಪ್ರಕೃತಿಯಲ್ಲೇ ಶ್ರೇಷ್ಠ ಜೀವಿಯಾದ ಮಾನವನಲ್ಲಿ ಯಾವ ನಿಯಮಗಳನ್ನು ಪ್ರಕೃತಿ ನಿರ್ಮಿಸಿಲ್ಲವೇ?
ಮಾನವನು ಪ್ರಕೃತಿಗಿಂತ ಬಲಿಷ್ಠನೇ?
ಎನ್ನುವ ಉತ್ತರ ಸಿಗದ ಸಹಸ್ರಾರು ಪ್ರಶ್ನೆಗಳು ಮನದ ಮೂಲೆಯಲ್ಲಿ ಕೊರೆಯುವುದು ಸಹಜವೇ....
ಮಾನವನ ಹುಟ್ಟಿನಲ್ಲಿ ಮೊದಮೊದಲು ಕೇವಲ ಆಹಾರಕ್ಕಾಗಿ ಇತರ ಜೀವಿಗಳೊಡನೆ ಸೆಣಸುತ್ತಾ ತನ್ನ ಅಸ್ಥಿತ್ವಕ್ಕಾಗಿ ಹೋರಾಡುತ್ತಿದ್ದವ, ನಂತರ ಬುದ್ದಿಬೆಳೆದಂತೆಲ್ಲಾ ತನ್ನ ಸುತ್ತಮುತ್ತಲ ಪರಿಸರಕ್ಕಾಗಿ ಇತರ ಪ್ರಾಣಿಗಳೊಡನೆ ಸೆಣಸಲಾರಂಬಿಸಿ ಅವುಗಳಿಗೆ ಭಯೋತ್ಪಾದಕನಾದ. ನಂತರ ತಾನಿಷ್ಟಪಟ್ಟ ಹೆಣ್ಣನ್ನು ದಕ್ಕಿಸಿಕೊಳ್ಳಲು ತನ್ನದೇ ವರ್ಗಕ್ಕೇ ಭಯೋತ್ಪಾದಕನಾಗುವ ಮೊದಲ ಹೆಜ್ಜೆ ಇಟ್ಟ.
ಇಲ್ಲಿಯವರೆವಿಗೂ ಚಾರ್ಲ್ಸ್ ಡಾರ್ವಿನ್ ನ ಥಿಯರಿ ಅನ್ವಯಿಸುತ್ತದೆ, ಬಹುಶಃ ಪ್ರಕೃತಿಯ ನಿಯಮಗಳನ್ನೂ ಪಾಲಿಸಿದ್ದಾನೆ.
ಆದರೆ ನಂತರ ಶುರುವಾಯ್ತು ನೋಡಿ 'ತಾನು ಕಂಡಿದ್ದೆಲ್ಲಾ ತನಗೇ ಮೀಸಲು' ತಾನು ಜಗದೊಡೆಯ, ತಾನು ಎಲ್ಲರಿಗಿಂತಾ ಬುದ್ದಿಜೀವಿ' ಎನ್ನುವುದು ಯಾವಾಗ ಆತನ ತಲೆಗೇರಿತೋ ಅಂದಿನಿಂದಲೇ ಸಂಪೂರ್ಣ "ಸ್ವಾರ್ಥ"ದ ದಾಸನಾಗಿ, ಎಲ್ಲವನ್ನೂ ಕಬಳಿಸಿ, ಕಡೆಗೆ ದೇವರ ಹೆಸರಿನಲ್ಲಿ ಭಯೋತ್ಪಾದಕನಾಗಿ ಇಂದು ನಿಂತಿದ್ದಾನೆ.
ಅದರಲ್ಲೂ ಕೆಲ ದೇಶಗಳಲ್ಲಿ ಭಯೋತ್ಪಾದಕನಾಗಿ ಸಾಯುವುದು ದೇವರ ಆಜ್ನೆ, ದೇವರ ಸಿಂಹಾಸನದಲ್ಲಿ ಅರ್ಧ ಸಿಕ್ಕುತ್ತದೆ ಇತ್ಯಾದಿ.......ಇತ್ಯಾದಿ.......ಇತ್ಯಾದಿ....... ಕಟ್ಟುಕಥೆಗಳನ್ನು ಹೇಳಿ, ಕೆಳ ವರ್ಗದ ಬಡವರಿಗೆ ಇಲ್ಲಸಲ್ಲದ ಆಸೆ ಆಮಿಷ ತೋರಿಸಿ ಮುಗ್ದ ಜೀವಗಳನ್ನು ಬಲಿತೆಗೆದು ಕೊಂಡು ಖುಷಿಪಡುತ್ತಾರೆ. ಈ ವಿಚಾರದಲ್ಲಿ ನಮ್ಮ ಪಕ್ಕದ 'ಪಾಕಿಸ್ತಾನ" ಎತ್ತಿದ ಕೈ.
ಇಂದು National Geographic Channel ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪ್ರಕಾರ ಕೇವಲ 3000 ರೂಗಳಿಗೆ ಒಬ್ಬ 'ಆತ್ಮಾಹುತಿ ಬಾಂಬರ್' ದೊರುಕುತ್ತಾನಂತೆ, ಅಷ್ಟೆ ಅಲ್ಲ ಕಳೆದ ವರ್ಷದ ಮುಂಬೈ ದಾಳಿ, ಅಮೇರಿಕಾದ ಡಬ್ಲ್ಯು. ಟಿ. ಓ ಕಟ್ಟಡಗಳ ದಾಳಿ, ಇವತ್ತಿನ ಆಫ್ಘನ್ ಮತ್ತು ಇರಾಕಿನ ಆತ್ಮಾಹುತಿ ದಾಳಿಗಳ ಬಾಂಬರ್ ಗಳೆಲ್ಲಾ ಪಾಕಿಸ್ತಾನದವರೇ. ಅಂದ ಮಾತ್ರಕ್ಕೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಪಾಕಿಸ್ತಾನದವರೆ ಅನ್ನುವುದು ವಿಪರ್ಯಾಸ.
ಅಂದು ತನ್ನ ಶತೃವಾದ ರಷ್ಯಾವನ್ನು ಎದುರಿಸಲು "ಒಸಾಮ ಬಿನ್ ಲಾಡೆನ್'' ನನ್ನು ಬೆಳೆಸಿದ್ದು ಇದೇ ಅಮೇರಿಕ!!!!!!. ಕಡೆಗೆ ಅಮೇರಿಕಾದ ಸೊಕ್ಕಿಗೆ ಸೆಡ್ಡು ಹೊಡೆದದ್ದು ಇದೇ ಒಸಾಮ ಬಿನ್ ಲಾಡೆನ್!!!!!!!!! ಅಷ್ಟೆ ಅಲ್ಲ ಭಾರತದ ವಿರುದ್ದ ಹೋರಾಡಲು ಪಾಕಿಸ್ತಾನ ಬೆಳೆಸಿದ್ದು ಇದೇ ಭಯೋತ್ಪಾದಕರನ್ನು, ಕಡೆಗೇನಾಯ್ತು? ಇಂದಿನ ಪಾಕಿಸ್ತಾನದಲ್ಲಿ ದಿನಕ್ಕೆರಡು ಆತ್ಮಾಹುತಿ ದಾಳಿ ಅದೇ ಪಾಕಿಸ್ತಾನಿ ಭಯೋತ್ಪಾದಕರಿಂದ!!!!!!
ಅದಕ್ಕೇ ಹೇಳೋದು ಭಯೋತ್ಪಾದಕರು ಬಸ್ಮಾಸುರರು!!!!!!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ