ಮಂಗಳವಾರ, ಡಿಸೆಂಬರ್ 23, 2008

ಏನೋ ಒಂಥರಾ ..ಆ ....ಆ


ತುಂಬಾ ದಿನಗಳ ನಂತರ ಬರೆಯಲು ಕುಳಿತರೆ ನಿಜಕ್ಕೂ ಏನೋ ಒಂಥರಾ ಆಗೋದು ಯರ್ರಿಗಾದ್ರೂ ಸಹಜವೇ. ಇರಲಿ ಪಿಟೀಲು ಕುಯ್ಯುವುದು ಬಿಟ್ಟು ಈ ಏನೋಒಂಥರಾ ದ ಬಗ್ಗೆ ಮಾತನಾಡೋಣ. ಏನೋ ಒಂಥರಾ ಎನ್ನುವುದು ಎಲ್ಲರಿಗು ವಕ್ಕರಿಸುವ ರೋಗವೂ ಹೌದು, ಕೆಲ ವೇಳೆ ವರದಾನವೂ ಹೌದು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯ ಸುಖನಿದ್ರೆಯ ಸಮಯದಲ್ಲಿ ಮಡದಿ ಸಮಯದ ಸುಪ್ರಭಾತ ಹಾಡುತ್ತಾ ಕಾಫಿಯ ಕಪ್ಪಿಡಿದು ಹೊದ್ದಿದ್ದ ಹೊದಿಕೆಯ ಸರಿಸಿದರೆ "ಇವಳ್ಯಾಕೆ ಯಾವಾಗಲು ಏನೋ ಒಂಥರಾ ?" ಅನಿಸದಿರದು. ಆಕೆ ಆ ರೀತಿ ಎಬ್ಬಿಸಿದ ದಿನ ಪೂರ್ತಿ "ಏನೋ ಒಂಥರಾ " ದ ಎಫ್ಫೆಕ್ಟು ಆಫೀಸಿನಲ್ಲಿ, ಸಹೋದ್ಯೋಗಿಗಳೊಡನೆ , ಕಾಫಿ ತರುವ ಜವಾನನೊಂದಿಗೆ, ಟೇಬಲ್ ಮೇಲಿನ ಫೈಲೇ ಗಳೊಡನೆ, ಬೇಗನೆ ಸ್ಟಾರ್ಟ್ ಆಗದ ಸ್ಕೂಟರ್ ನೊಡನೆ ಇತ್ಯಾದಿ ಇತ್ಯಾದಿಗಲೊಡನೆ ದಿನವೆಲ್ಲಾ "ಏನೋ ಒಂಥರಾ "
ಇನ್ನು ಉಪಯೋಗದ ಮಾತಿಗೆ ಬಂದರೆ ಯಾರದರೂ ಏನಾದ್ರು ಕೆಲಸ ಹೇಳಿದ್ರೆ ಇವತ್ತು ನನ್ಕೈಲಿ ಮಾಡಕ್ಕಾಗಲ್ಲ ಯಾಕಂದ್ರೆ "ಏನೋ ಒಂಥರಾ " ಎಂದು ಹೇಳಿ ತಪ್ಪಿಸಿಕೊಳ್ಳಬಹುದು.
ಹಾಗಾಗಿ ಇವತ್ತು ನನಗೆ ಬರಿಯುವುದಕ್ಕೆ "ಏನೋ ಒಂಥರಾ "

ಮಂಗಳವಾರ, ಡಿಸೆಂಬರ್ 2, 2008

ಅಶ್ರುತರ್ಪಣ

ಪ್ರಿಯ ಬ್ಲಾಗಿಗರೇ,
ಮೊನ್ನೆ ನಡೆದ ಮುಂಬೈ ನ ಬಾಂಬ್ ದಾಳಿಯಲ್ಲಿ ದುಷ್ಟರ ಸಂಚಿಗೆ ಬಲಿಯಾಗಿ, ತಮ್ಮ ಪ್ರಾಣ ಕಳೆದಿಕೊಂದವರಿಗೆ, ಆ ಖೂಳ ರನ್ನು ಸೆದೆಬಡಿದು ಜಯಿಸುವ ಹಾದಿಯಲ್ಲಿರುವಾಗ " ವೀರ ಮರಣವನ್ನಪ್ಪಿದ" ವೀರ ಸೇನಾನಿಗಳಿಗೆ ನನ್ನ ಸಂತಾಪವನ್ನು ಈ ಮುಲ್ಕ ಅರ್ಪಿಸುತಿದ್ದೇನೆ .
ಇದರ ಜೊತೆಗೆ ನಮ್ಮ ಹೇಸಿಗೆ ರಾಜಕಾರಣಿಗಳ ಕುತ್ಸಿತ ಬುದ್ದಿ ಕೂಡ ನಮ್ಮ ಪ್ರಾಣಗಳಿಗೆ ನಿಜವಾಗಿ ನಮಗೆ ರಕ್ಷಣೆ ಇದೆಯೇ ಎಂಬ ಜಿಜ್ಞಾಸೆಯನ್ನು ದೇಶದ ತುಂಬಾ ಹುಟ್ಟುಹಾಕಿದೆ. ನಮ್ಮದೇಶದ ಅಮೂಲ್ಯವಾದ ರಕ್ಷಣಾ ವ್ಯವಸ್ರೆಯನ್ನು ಈ ಗೊಮುಖವ್ಯಾಗ್ರರು ಹೀಗೆ ತಮ್ಮ ಸ್ವಾರ್ತಕ್ಕೆ ಬಳಸಿಕೊಂಡಿದ್ದಾರೆ, ಅದರಿಂದ ದೇಶದ ಘನತೆಗೆ ಹೀಗೆ ಚ್ಯುತಿಯಾಯಿತು? ಎನ್ನುವುದನ್ನು ನೆನಸಿಕೊಂಡರೆ ಯಾವ ಭಾರತಿಯನಿಗಾದರು ರಕ್ತ ಕುದಿಯುವುದು ಸಹಜವೇ.
ಇದಕ್ಕೆ ನಿಜವಾಗಿಯು ಪರಿಹಾರವಿಲ್ಲವೇ? ಇದಕ್ಕೆ ನಿಜಕ್ಕೂ ಹೊಣೆ ಯಾರು? ಎಂದು ಅವಲೋಕಿಸಿದರೆ ಖಂಡಿತವಾಗಿಯೂ ಸಿಗುವ ಉತ್ತರ " ಪ್ರತಿಯೊಬ್ಬ ಭಾರತೀಯನು ಇದಕ್ಕೆ ಹೊಣೆ ಎನ್ನುವುದು" ವಿಪರ್ಯಾಸವೇ ಸರಿ. ನಮ್ಮ ಪ್ರತಿನಿದಿಗಳನ್ನು ಚುನಾಯಿಸುವಾಗ ಸರಿಯಾಗಿ ಯೋಚಿಸಿ ಚುನಾಯಿಸಿದ್ದರೆ, ಸರ್ಕಾರಿ ಕಛೇರಿಯಲ್ಲಿ ನಮ್ಮ ಕೆಲಸ ಮಾಡಿಕೊಡಲು, ಲಂಚ ಕೇಳಿದವನ ಕೆನ್ನೆಗೆ ನಾಲ್ಕು ಬಾರಿಸುವ ಭಂಡ ಧೈರ್ಯ ನಮಗಿದ್ದಿದ್ದರೆ, ನಮಗೆ ಮತ್ತು ನಮ್ಮ ನೆರೆಯವರಿಗೆ ಯರಿದಲಾದ್ರು ಅನ್ಯಾಯವಾದಾಗ ಅನ್ಯಾಯ ಮಾಡಿದವರನ್ನು ಕೇಳುವ ಧೈರ್ಯ ಮಾಡಿದ್ದರೆ ನಮಗೆ ಖಂಡಿತ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಇಂಥ ಸಮಸ್ಯೆ ಬಂದಾಗ ಸ್ವಲ್ಪ ದಿನ ನಮ್ಮ ಮಾದ್ಯಮಗಳು ಎರಡು ದಿನ ಬಾಯಿ ಬದಿದುಕೊಲ್ಲುತ್ತವೆ. ಮೂರನೇ ದಿನ ಯಾವುದೋ ಸಿನಿಮಾ ತಾರೆಯಾ ಚಪ್ಪಲಿ ಕಳೆದದ್ದು, ನಮ್ಮ ಯಾವುದೊ ಮಂತ್ರಿಯ ಕೆಲಸಕ್ಕೆ ಬಾರದ ಸಮಾರಂಭಗಳು, ಅಸಹ್ಯ ಭರವಸೆಗಳು ಸುದ್ದಿಗಲಾಗಿರುತ್ತವೆ. ಇದು ನಮ್ಮ ದೇಶದ ದುರಂತವೋ ಅಥವಾ ನಾವೇ ಸೃಷ್ಟಿಸಿಕೊಂಡ ಅನೈತಿಕ ಕಂದರವೋ? ಗೊತ್ತಿಲ್ಲ.

ಬುಧವಾರ, ನವೆಂಬರ್ 26, 2008

ಸಣ್ಣ ತಾಯಮ್ಮನಿಗೆ ಸೂಟ್ಕೇಸ್ ಸಿಕ್ಕಿದ್ದು

ಒಮ್ಮೆ ನಮ್ಮ ಸಣ್ಣ ತಾಯಮ್ಮ ನಮ್ಮೂರಿನ ಕೆರೆಯ ತೂಬು ಗುಂಡಿಯ ಬಳಿ ಬಿಸಿಲ ಮಧ್ಯಾನ್ಹ ಬಟ್ಟೆ ಒಗೆಯುತ್ತಿದ್ದಳು. ಸುತ್ತಮುತ್ತ ಹಸಿರಾದ ಬತ್ತದ ಗದ್ದೆ ಅವಲೆದುರಿಗಿನ ಕೆರೆಯೇರಿ ಅದರ ಕೆಲಗಳ ರಸ್ತೆ ಇವಿಷ್ಟು ನಿರ್ಜನವಾಗಿದ್ದವು ಅವಳನ್ನು ಬಿಟ್ಟು. ಜಿಲ್ಲಾ ಕೇಂದ್ರದಿಂದ ಬಹಳ ದೂರವಿರುವ ನಮ್ಮೂರಿಗೆ ಆ ಕಾಲದಲ್ಲಿ ಅಷ್ಟೊಂದು ಬಸ್ಸುಗಲಾಗಲಿ ಸ್ಕೂತರ್ರು ಕಾರುಗಾಳಗಲಿ ಇರಲಿಲ್ಲ. ಆದರು ಆ ದಿನ ಬಿದರಕೋಟೆಯಾ ಅದೃಷ್ಟದ ಫಲವಾಗಿ ಆ ಕೆರೆಯ ದಾರಿಯಲ್ಲಿ ಇಬ್ಬರು ರಂದವರನ್ನು ಏರಿಕೊಂಡು ಸೊಳ್ಳೆ ಔಷಧಿ ಒಡೆಯುವ ಮಶೀನಿನಂತೆ ಸೀಮೆಯೇನ್ನೆಯುಕ್ತ ಹೋಗೆ ಉಗುಳುತ್ತ, ಕಿತ್ತು ಹೋದ ಅಕ್ಕಿಗಿರನಿಯ ಹಾಗೆ ಶಬ್ದ ಮಾಡುತ್ತಾ ಒಂದು ಚೇತಕ್ ಸ್ಕೂಟರ್ ಬಂತು. ಕವಚುಗತ್ತಿದ ತನ್ನ ಕಂಡು ಬಣ್ಣದ ಹಲ್ಲುಗಳನ್ನು ಬಿಟ್ಟುಕೊಂಡು, ಬಾಯೊಳಗೆ ಸ್ಕೂಟರ್ ಹೋಗೆ ಓಗಿದ್ದರೂಬಿಟ್ಟ ಬಾಯಿ ಬಿಟ್ಟ ಹಾಗೆ ಆ ಸ್ಕೂಟರನ್ನು ಪ್ರಪಂಚದ ೮ನೆ ಅದ್ಬುಟದ ಆಗೇ ನೋಡುತ್ತಾ, ಬರ್ರೆ ಒಗೆಯುವದನ್ನು ಮರೆತು ಹಾಗೆ ನಿಂತುಬಿಟ್ಟಳು.
ತತ್ಕ್ಷಣ ಆ ಸ್ಕೂಟರ್ ನಿಂದ "ಡಬ್" ಎಂದು ಸದ್ದಾಯಿತು. ಸ್ಕೂಟರ್ ನಿಂದ ಉಕ್ಕುತ್ತಿದ್ದ ಶಕತದಿಂದಾಗಿ ಅದೇನೆಂದು ತಕ್ಷಣ ಅವಳಿಗೆ ತಿಳಿಯಲಿಲ್ಲ. ಸ್ಕೂಟರ್ ನವರು ನಮ್ಮೂರಿನ "ಇಂಟರ್ನ್ಯಾಷನಲ್ ರಸ್ತೆಯಲ್ಲಿ"ಆಯಾ ತಪ್ಪಿ ಬಿದ್ದಿರಬಹುದೆಂಬ ಶಂಕೆಯಿಂದ, ಅವರಿಗೆ ಸಹಾಯ ಮಾಡುವ ಧಾವಂತದಿಂದ ಶಬ್ದ ಬಂದ ದಿಕ್ಕೆನೆಡೆಗೆ ತನ್ನ ಕೆಲಸ ಬಿಟ್ಟು, ಬಾಯಲ್ಲಿನ ಕಡ್ಡಿಪುಡಿ ಉಗಿಯುತ್ತಾ ಓಡಿದಳು.
ಅಷ್ಟು ಹತ್ತಿರ ಹೋದರು ಹೊಗೆಯಿಂದಾಗಿ ಸ್ಕೂಟರ್ ಕಾಣಲೇ ಇಲ್ಲ. ಆದರೆ ಅಕ್ಕಿ ಗಿರಣಿಯ ಶಬ್ದ ಕಿವಿಯಿಂದ ದೂರವಾಗುತ್ತಾ ಬಂತು. ಆದರು ಬಿದ್ದದ್ದು ಏನೆಂದು ತಿಳಿಯದೆ ತಲೆಯೊಳಗೆ ಉಳು ಬಿಟ್ಟುಕೊಂಡು ತನ್ನ ಕಾರ್ಯ ದಲ್ಲಿ ಮಗ್ನಲಾಗಲು ಹಿಂತಿರುಗಿ ಒಂದು ಹೆಜ್ಜೆಯಿತ್ತಲು. ಕಾಲಿಗೆ ಆ ಹೊಗೆಯೊಳಗೆ ಏನೋ ಯದವಿದಂತಾಯಿತು .
ಆ ಹೊಗೆಯಲ್ಲಿ ಯಾಕೆ ಎಡವಿದೆ ಎಂದು ತಿಳಿಯುವಷ್ಟರಲ್ಲಿ ಕೆಳಗೆ ಬಿದ್ದು ತನ್ನ ಮೇಲ್ದವಡೆಯ ೨ ಹಲ್ಲುಗಳನ್ನು ಕೆಟ್ಟ ರಸ್ತೆಗೆ ದಾನ ಕೊಟ್ಟಾಗಿತ್ತು. ಬಾಯಲ್ಲಿದ್ದ ಕಡ್ಡಿಪುಡಿ ಜೊತೆ ರಕ್ತವೂ ಸಹ ಸೇರಿ ಎರಡಕ್ಕೂ ವ್ಯತ್ಯಾಸ ತಿಲಿಯದಂತಾಯಿತು.
"ಅಯ್ಯವ್ವಾ!!ಈ ಹಾಲ್ಮನೆ ಕಲ್ಲು ನನ್ ಬೀಲ್ಸುದ್ದು ಅಲ್ದೆ ನನ್ನ ಹಲ್ಲು ವೋದ್ವಲ್ಲಪ್ಪೋ!" ಎನ್ನುವಶ್ರಲ್ಲಿ ಕಣ್ಣುಗಳಿಂದ ಗಳಗಳನೆ ನೀರು ಸುರಿದವು. ಆ ನೋವಿನಲ್ಲೂ ಮಿರಮಿರನೆ ಮಿಂಚುತ್ತಿದ್ದ ಕಂಡು ಬಣ್ಣದ ಸೂಟ್ಕೇಸ್ ಒಂದು ನೀರು ತಿಮ್ಬಿದ ಕಣ್ಣುಗಳಿಗೆ ಗೋಚರಿಸಿತು.
ತಲೆಯೊಳಗೆ ನೂರಾರು ಯೋಚನೆಗಳು ಒಣದರ ಹಿಂದೊಂದರಂತೆ ಓಡಾಡಿದವು. "ಎನಿರ್ಬೋದು? ಬಾಂಬ್ ಗೀಮ್ಬ್ ಏನಾರ?" ತಕ್ಷಣ ಎದೆ "ಝಾಲ್" ಅಂತು. ಊರಮುಂದಿನ ರಾಮ ಮಂದಿರದಲ್ಲಿ ಪ್ರತಿ ಶನಿವಾರ ನೋಡುತ್ತಿದ್ದ ಟಿವಿ ಯಾ ಸಿನಿಮಾದ ಪ್ರಭಾವಗಳು ಕೆಟ್ಟ ಯೋಚೆನೆಗಳಿಗೆ ತುಪ್ಪ ಸುರಿದವು.( ನಮ್ಮೂರಿನಲ್ಲಿ ಆ ೧೯೮೦ ರ ಕಾಲದಲ್ಲಿದ್ದ ೨ ಸಾರ್ವಜನಿಕ ಟಿವಿ ಗಳಲ್ಲಿ ಅದೂ ಒಂದು). " ಅಥ್ವಾ ಯಾವ್ದಾದ್ರು ಮಗಾ ಗಿಗಾ ಒಡೆದು ಹಾಕಿದ್ದರೋ ? ಏನೋ?" ಇತ್ಯಾದಿ..ಇತ್ಯಾದಿ...ಯೋಚನೆಗಳು ಸುಲಿಯುವಷ್ಟರಲ್ಲಿ ರಸ್ತೆಯಲ್ಲಿದ್ದ ಸ್ಕೂಟರ್ ಹೋಗೆ ಸರಿದು ರಸ್ತೆ ತಿಳಿಯಾಗಿತ್ತು,ಹಾಗೆ ಸಂನತಾಯಮ್ಮನ ಮನಸ್ಸೂ ಸಹ.....
ಇದರ ಮದ್ಯೆ ಮಿಂಚಿನಂತೆ ಒಂದು ಒಳ್ಳೆಯ ಯೋಚನೆ " ಕಾಸು ಒಡವೆ ಏನಾರ?!!". ಹಾಗನಿಸಿದ್ದೆ ತಡ ಸುತ್ತ ಮುತ್ತ ಯಾರಾದರು ಕಾಣುತ್ತಾರೋ ಇಲ್ಲವೊ? ಅಂತ ಅವಲೋಕಿಸಿದಳು. ಯಾರೂ ಕಾಣಲಿಲ್ಲ, ನಿರ್ಜನವಾದ ರಸ್ತೆ, ದೂರದಲ್ಲಿ ಯೆರೀ ಮೇಲೆ ಮೀಯುತ್ತಿದ್ದ ೪ ಕುರಿಗಳು ಕಾಣಿಸಿದವು. ಸೋಮೇಶ್ವರ ಗುಡಿಯ ಬಳಿ ತಮ್ಮ ಪಟ್ಟ ಪಟ್ಟಿ ಚಡ್ಡಿ ಕಾಣುವ ಹಾಗೆ ಒಂದು ಕೈಯಲ್ಲಿ ಪಂಚೆ ಮೇಲೆತ್ತಿ,ಮತ್ತೊಂದು ಕೈಯಲ್ಲಿ ತಮ್ಮ ಜೋಡು ಹಿಡಿದು ತೆವರಿಯ ಮೇಲೆ ಸರ್ಕಸ್ ಮಾಡುತ್ತಿದ್ದ ಶಾನುಭೋಗರಿಗೆ ಇವಳನ್ನು ನೋಡುವಷ್ಟು ದೃಷ್ಟಿ ಸರಿಯಿರಲಿಲ್ಲ.
ಎಲ್ಲವೂ ಸರಿ ಎಂದು ತಿಳಿದ ತಕ್ಷಣ ತನ್ನ ಹಲ್ಲಿನ ಯೋಚನೆ ಮರೆತು ತನ್ನ ಒದ್ದೆಯಾದ ಹಳದಿ ಸೀರೆಯನ್ನು ಕಣಕಾಲವರಗೆ ಮೇಲೆತ್ತಿ ಒಂದೇ ಕುಪ್ಪಗೆ ತಾನು ಬಟ್ಟೆ ಒಗೆಯುತ್ತಿದ್ದ ತೂಬಿನ ಗುಂಡಿ ತಲುಪಿದಳು. ಅರ್ದಂಬರ್ದ ಒಗೆದಿದ್ದ ಬಟ್ಟೆಗಳನ್ನು ತೆಗೆದು ಮನ್ಕರಿಯಲ್ಲಿ ಹಾಕುವ ಮುನ್ನ ಕೆಳಗೆ ಸೂಟ್ಕೇಸ್ ಇಡುವುದು ಮರೆಯಲಿಲ್ಲ. "ಯಾರಾದರು ಹಲ್ಲುಗಳನ್ನು ನೋಡಿದರೆ" ಅಂದುಕೊಂಡು ಕೆರೆಯ ನೀರಿನಲ್ಲಿ ಬಾಯಿ ಮುಕ್ಕಳಿಸಿ, ತಲೆಯಮೇಲೆ ಮಂಕರಿ ಹಿಡಿದು, ತನ್ನ ಓದಿದ ತುಟಿಗಳನ್ನು ಎಡಗೈ ಸರಗಿಂದ ಮುಚ್ಚಿ ಬಿರ ಬಿರನೆ ಮನೆಯಕದೆಗೆ ಹೆಜ್ಜೆ ಹಾಕಿದಳು.
ಅವಳು ನಡಿಯುತ್ತಿದ್ದ ಬಿರುಸಿಗೆ ಸುತ್ತ ಮುತ್ತಲಿದ್ದ ಒಣಗಿದ ಎಲೆಗಳು ಕಸ ಕಡ್ಡಿ ಗಳು ಅವಳನ್ನೇ ಹಿಮ್ಬಾಲಿಸುತ್ತಿದ್ದದ್ದು ಅವಳಿಗೆ ತಿಳಿದಿಲ್ಲ. ರಸ್ತೆಯಲ್ಲಿ ಓಡಾಡುವವರು ಇವಳ ಬಿರುಸು ನೋಡಿ "ಓಹೋ,ಸಣ್ಣ ತಾಯಮ್ಮನ ಮನೆಯಲ್ಲಿ ಯಾರಿಗೋ ಏನೋ ಆಗಿರಬಹುದು" ಎಂದು ಶಂಕಿಸಿದರು. ಕೂಡಲೇ ತನ್ನ ವೇಗವನ್ನು ತಗ್ಗಿಸಿದರೂ ಮನದಲ್ಲಿ ಸೂಟ್ಕೇಸ್ ನ ಮಂದಿಗೆ ತಿನ್ನುವುದು ನಿಂತಿರಲಿಲ್ಲ.
ಹಾಗು ಹೀಗೂ ಮನೆ ತಲುಪಿ, ದಡಾರ್ !! ಎಂದು ಬಾಗಿ ತೆಗೆದು, ಮತ್ತೆ ಬಾಗಿ ಮುಚ್ಚಿ, ಬಟ್ಟೆಗಳನ್ನು ಕೆಳಗೆ ಹಾಕಿ ಸೂಟ್ಕೇಸ್ ಕೈಗೆ ತೆಗೆದುಕೊಂಡಳು. ಆದರೆ ಅದನ್ನಿ ತೆಗೆಯುವುದು ಹೀಹೆಂದು ತಿಳಿಯಲಿಲ್ಲ. " ಅವ್ವಾ, ಅವ್ವಾ!" ಎಂಬ ಮಗನ ಕೂಗು. ಸೂಟ್ಕೇಸ್ ಅಲ್ಲೇ ಬಿಟ್ಟು ಬಾಗಿಲು ತೆಗೆದು ಮಗ ಒಳ ಬಂದಮೇಲೆ ಮತ್ತೆ ಬಾಗಿಲು ಬದ್ರಪಡಿಸಿ ೮ ವರ್ಷದ ಮಗನಿಗೆ ಸೂಟ್ಕೇಸ್ ತೋರಿಸಿ ಅದನ್ನು " ತಗಿ ನೋಡವ?" ಎಂದಳು. ಸ್ಕೂಲ್ನಲ್ಲಿ, ಇನ್ಸ್ಪೆಕ್ಟರ್ ಬಂದಾಗ ಇದೆ ತರಹದ ಸೂಟ್ಕೇಸ್ ತಂದಿದ್ದು, ಅದನ್ನು ಹೀಗೆ ತಗೆದರು? ಎಂಬುದನ್ನೂ ತಿಳಿದೀದ್ದ ಲೋಕೆಶನಿಗೆ ತಗೆಯುವುದು ಕಷ್ಟವಾಗಲಿಲ್ಲ. ಅವನು ಅದನ್ನು ತಗೆಯುತ್ತಿರುವಾಗಲೇ ಅದರಲ್ಲಿನ ದುಡ್ಡು ತೆಗೆದು, ಮಗಳ ಮಾಡುವೆ ಮಾಡಿ, ಮಗನಿಗೆ ಊರಮುಂದೆ ನಿಂಗಣ್ಣನ ಅಂಗಡಿ ಪಕ್ಕದಲ್ಲೊಂದು ಅಂಗಡಿ ಮಾಡಿಕೊಟ್ಟಂತೆ, ತನ್ನ ಗಂಡ ಮೈಕ್ ನಾಗಣ್ಣ ನ ಬಳಿಯಿದ್ದ "ಹೀರೋ ಹೋಂಡ" ಗಾಡಿ ಕೊಂಡು ಕೊಂಡು, ಓದಿಸಿಬಂದಂತೆ ಕನಸು ಕಾನುತ್ತಿರುಆಗಲೇ " ಅಯ್ಯೋ ನಿನ್ನ ! ನಿಂಗ್ಯಕವ್ವ ಇಂತಾ ಬುದ್ದಿ ಬಂತು ! ಇದ್ನ್ಯರಾರ ಮನೆಯೋಳಕೆ ತಂದಾರೆ?" ಎಂದಾಗಲೇ ಇಹಲೋಕಕ್ಕೆ ಅವಳು ಬಂದದ್ದು, ಅದರೊಳಗಿನ ಹೊಸ ಹೊಸ "ಶೇವಿಂಗ್ ಬ್ಲೇಡ್ , ಹೊಸ ಚಾಕು, ಶೇವಿಂಗ್ ಬ್ರಶ್, ಇತ್ಯಾದಿ, ಇತ್ಯಾದಿ....... ಭಜಂತ್ರಿ ಸಾಮಗ್ರಿಗಳನ್ನು " ನೋಡಿದ ಮೇಲೆ ತನ್ನ ಕನಸುಗಳಿಗೆ ಯಾರೋ ಪಿನ್ನ ಚುಚ್ಚಿದಂತಾಯ್ತು. ಜೊತೆಗೆ ತನ್ನ ಮಗನ "ದಂಗೂರದಿಂದ " ಊರೊಳಗೆ "ಸಣ್ಣ ತಾಯಮ್ಮನಿಗೆ ಸೂಟ್ಕೇಸ್ ಸಿಕ್ಕಿದ್ದು" ಹಾಸ್ಯದ ವಸ್ತುವಾಗಿ ಕುಶಿಪದುವಂತಾಯಿತು.

ಮಂಗಳವಾರ, ನವೆಂಬರ್ 25, 2008

ಪಾಳೆಗಾರನ ಪಳೆಯುಳಿಕೆ ಕಥೆಗಳು

ಹಲೋ ನನ್ನ ಹೆಸರು ಉಮಾಶಂಕರ
ನನ್ನ ಹುಟ್ಟೂರು ಮಂಡ್ಯ ಜಿಲ್ಲೆಯಬಿದರಕೋಟೆ ನಮ್ಮ ಕುಟುಂಬ ಆಗೇ ಈಗೆ ಅಂಥ ಹೇಳಿ ನಿಮ್ಮ ತಲೆ ತಿಂದು ಬೋರ್ ಹೋದಸೋಲ್ಲ ಬಿಡಿ. ಆದರೂ ನಮ್ಮೂರಿನ್ ಬಗ್ಗೆ ಹೇಳಲಿಲ್ಲಂದ್ರೆ ನನ್ನ ಮನಸು ತಡಿಯಲ್ಲ.
ಅದಕ್ಕೆ ನಮ್ಮ ಸಣ್ಣ ತಾಯಮ್ಮನ ಕಥೆ ಕೇಳಿ.
ನಮ್ಮ ಕಥಾನಾಯಕಿ ಸಣ್ಣ ತಾಯಮ್ಮ ತುಂಬಾ ಅಂದ್ರೆ ತುಂಬ ಮುಗ್ದೆ, ಎಷ್ಟು ಮುಗ್ದೆ ಅಂದ್ರೆ, ಒಂದ್ಸಲ ಅವಳ ಮಗ ಲೋಕೇಶ್ ಸಂಜೆ ೬ ಗಂಟೆಯಲ್ಲಿ ಬೀದಿಯಲ್ಲಿ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ.ಅಡುಗೆಮನೆಯೊಳಗೆ ಮಗಳುಬೃಂದಾ ಅಕ್ಕಿ ರೊಟ್ಟಿ ಮಾದುತ್ತಿದ್ದಳು ನಮ್ಮ ಕ ವಿ ಮ ಅವರ ಪ್ರಭಾವದಿಂದಾಗಿ ಬಿದರಕೋಟೆ ಪೂರ್ತಿಯಾಗಿ ಕತ್ತಲೆಯಲ್ಲಿ ಮುಳುಗಿತ್ತು. ಚಿನ್ನರೊಡನೆ ಆಡುತ್ತಿದ್ದ ಲೋಕೇಶ ಒಂದು ಕಪ್ಪೆ ಯನ್ನು ಬಡಿದು ಕೊಂದ. ಕೊಂದ ವನು ಸೀದಾ ಅಡುಗೆಮನೆಯಲ್ಲಿದ್ದ ಅರ್ದಂಬರ್ದ ರುಬ್ಬಿದ್ದ ಚಾಟ್ನಿ ಬಳಿ ಇಟ್ಟು ಹೊರಬಂದದ್ದನ್ನ ಅವನ ಅಕ್ಕ ಬೃಂದಾ ಕೂಡ ಗಮನಿಸಲಿಲ್ಲ. ಅಷ್ಟರಲ್ಲಿ ಸಣ್ಣ ತಾಯಮ್ಮನಿಗಿ ಒಳಗಿಂದ ಬರುತ್ತಿದ್ದ ರೊಟ್ಟಿಯ ವಾಸನೆಯಿಂದಾಗಿ ಅವಳ ಹಸಿವು ಸಿಕ್ಕಾಪಟ್ಟೆ ಜಾಸ್ತಿಯಾಯಿತು. ಹೊರಗೆ ತನ್ನ ಅಕ್ಕ ಪಕ್ಕದ ಮನೆಯವರೊಡನೆ ಕುಳಿತು ಕಂಡವರ ಮನೆಯ ಸುದ್ದಿ ಕೇಳುತ್ತಾ ಕಡ್ಡಿಪುಡಿ ಬಾಯದಿಸುತ್ತಿದ್ದವಳು "ಮೇಯೋ ಬುರುಂದ ವಟ್ಟೆಯೊಳಗೆ ಅಗುಸ್ರ ಕತ್ತೆ ಓದೋಯ್ತವೆ ತಿನ್ನಾಕೆ ತಾರ್ಲಮ್ಮಿ" ಅಂದಳು.
"ಅಮ್ಮೋ ವೋಳಕ್ಕೊಗಿ ತಿನ್ನು, ಹಕ್ಕಿ ಹಾರೋ ವೊತ್ತು, ಇಕ್ಕೆ ಗಿಕ್ಕೆ ಉದರಾದು" ಅಂತಪಕ್ಕದ್ಮನೆ ಗೌರಕ್ಕ ಬಿತ್ತಿ ಸಲಹೆ ಕೊಟ್ಳು.
"ಇದೇನ್ ಗೌರಿ ಹಕ್ಕಿ ಮರುದ್ಮ್ಯಲೇ ಕುಂತಾಗ ಮಾತ್ರ ಅಲ್ವ ಪಿಕ್ಕೆ ಇಕ್ಕಾದು. ಹರಾದ್ವಾಗ ಎಲ್ಲರ ಇಕ್ಕವ" ಅಂತ ತನ್ನ ಬಾಯೊಳಗಿನ ಕಡ್ಡಿಪುಡಿ ಉಗಿಯುತ್ತ ಕೇಳಿದಳು.
ಇನ್ನು ಇವಳ ತರ್ಕಕ್ಕೆಉತ್ತರಿಸುತಿದ್ದರೆ ಬೆಳಕಅರಿವುದೆಂದು ಹೆಂಗಸರ ಸಮಾವೇಶದಿಂದ ಗೌರಕ್ಕ "ಮುಸ್ಸಂದೆಯಯ್ತು ದೀಪ ಅಸ್ಸುವ " ಅಂತ ಮೇಲೆದ್ದಳು.
ಅಷ್ಟರಲ್ಲಿ ಮಗಳು ರೊಟ್ಟಿ ಮತ್ತು ಚಟ್ನಿ ಹಾಕಿದ ಸಿಲ್ವಾರದ ಪ್ಲೇಟ್ ತಂದು ಕೊಟ್ಟಳು .
ತಾಯಮ್ಮ ಚೂರು ರೊಟ್ಟಿ ಮುರಿದು ಚಟ್ನಿ ಹಜ್ಜಿ ಬಾಯಿಗೆ ಇಟ್ಟಳು!
" ತ್ತು! ಇವಳ ಹಾಳಾಗ ಯಾವ ಸೀಮೆ ಚತ್ನಿಯಮ್ಮಿ ಇದು, ಒಂದುಪ್ಪಿಲ ಸಪ್ಪಇಲ್ಲ " ಎಂದು ಗೊಣಗುತ್ತ ಅರ್ದ ರೊಟ್ಟಿ ತಿಂದಳು. ಮುಂದೆ ಆ ಕೆಟ್ಟ ರುಚಿಯ ಚತ್ನಿಯೋದನೆ ರೊಟ್ಟಿ ತಿನ್ನಲು ಸಾದ್ಯವಾಗಲಿಲ್ಲ. "ನಗನ್ನನಂಗಡಿ ಉಪ್ಪು ಕಾಲಿಯಾಗಿತ್ತೋ, ಮದೆವನಂಗ್ದೀಲಿ ಮೆಣಸು ಕಾಯ್ ಇರ್ಲಿಲ್ವೋ, ಕೂಲಿಯೋ ನಾಲಿಯೋ ಮಾಡ ತಂದ್ ಹಾಕುದ್ರುವೆ ನೆಟ್ಗೆ ಅಡ್ಗೆ ಮಾಡಕ್ ಬರಲ್ಲ, ಮುಂದೆ ಗಂಡನ್ನ ಜೊತೆ ಯಂಗ್ ಬಾಳಿ ನಾ ಕಾಣೆ" . ಇತ್ಯಾದಿ ಇತ್ಯಾದಿ ಬಯ್ಯುತ್ತ ೨ ರೊಟ್ಟಿ ತಿಂದಳು. ಅಷ್ಟರಲ್ಲಿ ಹೊರಗೆ ಆಡುತ್ತಿದ್ದ ಮಗ ಒಳ ಬಂದು " ಅಕ್ಕೋ ಇಲ್ಲಿ ಕಪ್ಪೆ ಮದ್ಗಿಡ್ನಲ್ಲ ಎಲ್ಲ" ಅಂದ. ಬ್ರುನ್ದಗೆ ಜಂಗಾಬಲವೇ ಉಡುಗಿ ಹೋಯ್ತು. ಅದೇ ಅನುಮಾನದ ಮೇಲೆ ಸೀಮೆ ಎಣ್ಣೆ ಬುದ್ದಿಇಡಿದು ಹೊರ ಬಂದು ಅವ್ವನ ತಟ್ಟೆ ನೋಡುತ್ತಾಳೆ !!!! ಅವ್ವನ ತಟ್ಟೆಯಲ್ಲಿ ರೊಟ್ಟಿ ಚಟ್ನಿ ಬದಲು " ಕಪ್ಪೆ"!!
ಈಗ ಸುಸ್ತಾಗುವ ಸರದಿ ಸಣ್ಣ ತಾಯಮ್ಮನದು